ಹ್ಯಾವೆಲ್, ಇ ಬಿ -
ಪ್ರಸಿದ್ಧ ಕಲಾಚಿಂತಕ ಈತ ಕಲ್ಕತ್ತೆಯ ಕಲಾಶಾಲೆಗೆ ಪ್ರಧಾನ ಉಪಾಧ್ಯಾಯನಾಗಿ ಬಂದ. ಭಾರತದ ಕಲಾಸಂಸ್ಕøತಿಯನ್ನು ಚೆನ್ನಾಗಿ ಅರಿತು ಸಾಂಪ್ರದಾಯಿಕ, ಸಂಸ್ಕøತಿಕ ಹಾಗೂ ಸುಶಿಕ್ಷಿತ ಚಿತ್ರಕಲೆಗೆ ಪುನರುಜ್ಜೀವನ ನೀಡಿದ. ಇವನ ಶಿಷ್ಯನಾದ ಅವನೀಂದ್ರನಾಥ ಠಾಕೂರ್, ಹಾಗೂ ಅವನ ಅಣ್ಣ ಗಗನೇಂದ್ರ ಠಾಕೂರರೊಂದಿಗೆ ಸೇರಿ 1901-03ರ ಅವಧಿಯಲ್ಲಿ ಭಾರತೀಯ ಪ್ರಾಚ್ಯಕಲಾಸಂಸ್ಥೆಯನ್ನು ಸ್ಥಾಪಿಸಿದ. ಭಾರತದ ಕಲೆ, ಸಂಸ್ಕøತಿಗಳ ಕುರಿತು ಪಾಶ್ಚಾತ್ಯರಲ್ಲಿದ್ದ ಕೀಳು ಮನೋಭಾವನೆಗಳನ್ನು ಅಲ್ಲಗಳೆದ. ಇವನ ಇಂತಹ ಕಾರ್ಯಗಳಲ್ಲಿ ಇವನ ಶಿಷ್ಯರಾದ ಅವನೀಂದ್ರನಾಥ ಠಾಕೂರ್ ಹಾಗೂ ಮೈಸೂರು ವೆಂಕಟಪ್ಪ, ನಂದಲಾಲ್ ಬಸು, ಶೈಲೇಂದ್ರನಾಥದೇವ್, ಕ್ಷಿತೀಂದ್ರನಾಥ ಮಜುಂದಾರ್ ಮೊದಲಾದವರು ನೆರವಾದರು.			
		*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ